Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಚಿತ್ರ ಮಾಹಿತಿ’ Category

ಮೈಸೂರಿನ ಸರಸ್ವತೀಪುರ ೮ನೇ ಮುಖ್ಯರಸ್ತೆಯ (ಬಂದಂತಮ್ಮ ದೇವಾಲಯದ ಎದುರು ಭಾಗದ ರಸ್ತೆ) ಕಾಲುದಾರಿಯಲ್ಲಿರುವ ಜೀವಂತ ಮರಗಳ ಗೆಲ್ಲನ್ನು ಕಡಿದರು. ಆದರೆ ಗೆಲ್ಲುಕಡಿದ ಮರದ ಪಕ್ಕದಲ್ಲೇ ಒಣಗಿದ ಮರ ಇತ್ತು. ಅದರ ರೆಂಬೆಯನ್ನು ಮಾತ್ರ ಕಡಿಯಲಿಲ್ಲ. ಆ ಮರದ ರೆಂಬೆಗಳು ಒಣಗಿ ಹೋಗಿವೆ. ಅದರ ರೆಂಬೆ ಕತ್ತರಿಸದೆ ಹಸುರಾಗಿರುವ ಮರದ ರೆಂಬೆ ಕತ್ತರಿಸಿ ಹಾಕಿದ್ದಾರೆ! ಚಿತ್ರ ನೋಡಿ.maramara 2ona marakke illa kodali

 

ಮೈಸೂರಿನ ಸರಸ್ವತೀಪುರದಲ್ಲಿ ಕಾಮಾಕ್ಷೀ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ರುವ ಕಾಲುದಾರಿಯ ಒಂದು ಮರದ ಬುಡಕ್ಕೆ ಜಲ್ಲಿ ಮರಳು ತುಂಬಿ ಅದನ್ನು ಉಸಿರುಕಟ್ಟಿಸಿದ ಸ್ಥಿತಿಗೆ ತಂದಿದ್ದಾರೆ.  ಮರಕ್ಕೂ ಜೀವವಿದೆ ಎಂಬ ಭಾವ ಮನುಜನಿಗೆ ಬರುವುದಿಲ್ಲವಲ್ಲ.  ಎಷ್ಟೋಕಡೆ ಮರದ ಬುಡಕ್ಕೇ ಸಿಮೆಂಟು ಹಾಕಿ ಜಡಿಯುವುದನ್ನೂ ಕಾಣುತ್ತೇವೆ.

usirugattisuva pari marakkeke e shikshe

 

Read Full Post »

ಮೈಸೂರು ದಸರ

ಸುಮಾರು ೨೭ ವರ್ಷಗಳಿಂದ ಮೈಸೂರಲ್ಲಿ ನೆಲೆಸಿರುವೆ. ಮೈಸೂರಲ್ಲಿದ್ದೂ ದಸರ ಮೆರವಣಿಗೆ ನೋಡದೆ ಇದ್ದರೆ ಹೇಗೆ? ಯಾರದೋ ಮನೆ ತಾರಸಿಮೇಲಕ್ಕೆ ಮುರುಕು ಏಣಿಯಲ್ಲಿ ಹತ್ತಿ ೧೯೮೭ರಲ್ಲಿ ದಸರ ಜಂಬೂಸವಾರಿ ಮೆರವಣಿಗೆಯನ್ನು ನೋಡಿದ್ದು ಮಸುಕು ಮಸುಕಾಗಿ ನೆನಪಿದೆ. ೨೦೧೧ರಲ್ಲಿ ಬಂಬೂಬಜಾರಿನಲ್ಲಿ ಪರಿಚಿತರ ಮನೆ ತಾರಸಿಯಲ್ಲಿ ಗಂಟೆಗಟ್ಟಲೆ ಬಿಸಿಲಲ್ಲಿ ಒಣಗಿ ಮೆರವಣಿಗೆ ನೋಡಿ ಆನಂದಿಸಿದ್ದೆವು. ಒಮ್ಮೆಯಾದರೂ ಅರಮನೆ ಮುಂದೆ ಅಥವಾ ಪಕ್ಕ ಕುಳಿತು ಜಂಬೂಸವಾರಿ ನೋಡಬೇಕೆಂದು ಪ್ರತೀವರ್ಷ ಯೋಚಿಸುತ್ತಲೇ ಇರುತ್ತಿದ್ದೆ. ಆದರೆ ಜನಜಂಗುಳಿಗೆ ಹೆದರಿ ಆ ಸಾಹಸ ಮಾಡಲು ಹೋಗಿರಲಿಲ್ಲ. ಈ ಸಲ ೨೦೧೪ರ ಜಂಬೂಸವಾರಿಯನ್ನು ಅರಮನೆ ಬಳಿಯಿಂದ ನೋಡುವ ಅವಕಾಶ ತಾನಾಗಿ ಒದಗಿ ಬಂತು. ಸ್ನೇಹಿತೆ ವೈಶಾಲಿಯವರು ಪ್ರೀತಿಯಿಂದ ೨ ಪ್ರವೇಶಚೀಟಿ ಕೊಟ್ಟಿದ್ದರು.

ಉದಾಸೀನ ಮಾಡದೆ ಹೋಗುವುದೆಂದು ತೀರ್ಮಾನಿಸಿ ಅಣ್ಣನ ಮಗ ಅಕ್ಷಯಕೃಷ್ಣನನ್ನು ಕರೆದುಕೊಂಡು ಮಧ್ಯಾಹ್ನ ೧೨.೪೫ಕ್ಕೆ ಹೋದೆ. ಮೈಸೂರಲ್ಲಿದ್ದು ೧೮ವರ್ಷ ಆದರೂ ಒಮ್ಮೆಯೂ ದಸರ ಮೆರವಣಿಗೆ ನೋಡಲಿಲ್ಲವೆ ಎಂದು ಅವನಿಗೆ ಇನ್ನು ಯಾರೂ ಹೇಳುವಂತಿಲ್ಲ! ಬಲರಾಮ ದ್ವಾರದಿಂದ ಸರತಿಸಾಲಿನಲ್ಲಿ ಪ್ರವೇಶವಾಗಿ ಕೋಟೆ ಆಂಜನೇಯ ದ್ವಾರದ ಬಳಿ ಶಾಮಿಯಾನದ ಅಡಿ ಕುರ್ಚಿಯಲ್ಲಿ ಕೂರಲು ಅವಕಾಶವಾಯಿತು.

20141004_131933

ಎಲ್ಲಿ ನೋಡಿದರೂ ಜನ. ಕಟ್ಟಡದ ಮೇಲೆ, ಮರದಮೇಲೆ, ಲೈಟ್ ಕಂಬದಮೇಲೆ ಎತ್ತರದ ಸ್ಥಳದಲ್ಲೆಲ್ಲ ಜನ.

 ಮುಖ್ಯಮಂತ್ರಿ ಸಿದ್ಧರಾಮಯ್ಯ ೧.೧೫ಕ್ಕೆ ನಂದಿಧ್ವಜಕ್ಕೆ ಪೂಜೆ ನೆರವೇರಿಸುವುದರೊಂದಿಗೆ ೪೦೪ನೇ ದಸರ ಮೆರವಣಿಗೆ ಪ್ರಾರಂಭಗೊಂಡಿತು. ಮೊದಲಿಗೆ ವೀರಭದ್ರ ಕುಣಿತ. ಮೆರವಣಿಗೆಯ ಮುಂಚೂಣಿಯಲ್ಲಿ ನಿಶಾನೆ ಆನೆ ಬಲರಾಮ, ಪಟ್ಟದ ಆನೆ ಗಜೇಂದ್ರನೊಡನೆ ಗೋಪಿ, ಪ್ರಶಾಂತ್ತ, ವರಲಕ್ಷ್ಮೀ ಆನೆಗಳು ಗಜ ಗಾಂಭಿರ್ಯದಿಂದಲೇ ಸಾಗಿದುವು. ಆನೆಗಳ ಹಿಂದೆ ಸುಮಾರು ನೂರಕ್ಕೂ ಹೆಚ್ಚು ಕಲಾತಂಡಗಳು, ಸ್ತಬ್ಧಚಿತ್ರಗಳು ಸಾಲು ಸಾಲಾಗಿ ಸಾಗಿದುವು. ಮರಗಾಲು ಕುಣಿತದವರ ಸಾಧನೆ ನಿಜಕ್ಕೂ ಅದ್ಭುತ. ಸುಮಾರು ೫ಕಿಮೀ ದೂರ ನಡೆಯುವುದು ಸಾಹಸವೇ ಸರಿ. ಹನುಮಂತ ವೇಷಧಾರಿ ಮರಗಾಲಿನಲ್ಲಿ ೪೦ಅಡಿ ಎತ್ತರ!ದಿಂದ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾದ. ನಂದಿಧ್ವಜ ಕುಣಿತ, ನವಿಲು ನೃತ್ಯ, ತಮಟೆವಾದನ, ಡೊಳ್ಳುಕುಣಿತ, ಕೀಲುಕುದುರೆ, ಹಗಲುವೇಷ, ಗೊರವರ ಕುಣಿತ, ಲಂಬಾಣಿ ನೃತ್ಯ, ಕಂಗೀಲು ನೃತ್ಯ, ಪಟಕುಣಿತ, ಕಥಕ್ಕಳಿ ನೃತ್ಯ, ಸೋಮನ ಕುಣಿತ, ಬೀಸುಕಂಸಾಳೆ, ಪೂಜಾಕುಣಿತ, ಮಹಿಳೆಯರ ಚೆಂಡೆಮೇಳ ಇತ್ಯಾದಿ ಒಂದೊಂದೇ ಸಾಗಿದಾಗ ನಾವು ನೋಡಿಯೇ ಸುಸ್ತು. ಈ ಸಲ ಹೊರರಾಜ್ಯದ ಕಲಾಪ್ರಕಾರಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಕೇರಳದ ತೈಯಂ ಮತ್ತು ತಿಡಂಬು ನೃತ್ಯ, ಅಸ್ಸಾಂ ರಾಜ್ಯದ ಬಿಹು ಜಾನಪದ ನೃತ್ಯ, ತಮಿಳುನಾಡಿನ ತಪ್ಪಟ್ಟಂ, ಕರಗಟ್ಟಂ, ಪಾಂಡಿಚೇರಿ ಕಲಾವಿದರ ನೃತ್ಯ, ಪಂಜಾಬಿನವರ ಬಾಂಗ್ರಾ ನೃತ್ಯ, ಒರಿಸ್ಸ, ಮತ್ತು ಉತ್ತರಪ್ರದೇಶದವರ ಜಾನಪದ ನೃತ್ಯ. ಪಿರಿಯಾಪಟ್ಟಣದ ಟಿಬೆಟಿಯನ್ನರ ನೃತ್ಯವೂ ಇತ್ತು. ಎಲ್ಲ ಕಲಾವಿದರ ಉತ್ಸಾಹ ನೋಡಿ ಜನರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಸಂಗೀತವಾದ್ಯದ ಗಾಡಿಯನ್ನು ಮುನ್ನಡೆಸಲು ಆನೆ ಅಭಿಮನ್ಯು ಹೆಗಲು ಕೊಟ್ಟ. ಆದರೆ ಯಶಸ್ವಿಯಾಗಲಿಲ್ಲ. ಆಯುರ್ವೇದ ವೃತ್ತದ ಬಳಿ ಬಂದಾಗ ಬಳಲಿದ. ಮತ್ತು ಐದಕ್ಕೂ ಹೆಚ್ಚುಸಲ ಗಾಡಿ ಎಳೆಯದೆ ನಿಂತು ಬಿಟ್ಟ. ಹಾಗಾಗಿ ಅರ್ಧದಲ್ಲೇ ವಾಪಾಸ್ ಅರಮನೆಗೆ ಹಿಂದಿರುಗಿದ.

ಇತ್ತ ಕುರ್ಚಿಯಲ್ಲಿ ಕುಳಿತ ಜನರು ಜಗಳದಲ್ಲಿ ನಿರತ. ಎದುರಿನ ಸಾಲಲ್ಲಿ ಕೂತವರು ಮೆರವಣಿಗೆಯಲ್ಲಿ ಬರುವ ಕಲಾವಿದರನ್ನು, ಸ್ತಬ್ದಚಿತ್ರವನ್ನು ನೋಡಲು ಎದ್ದು ನಿಲ್ಲುತ್ತಿದ್ದರು. ಆಗ ಹಿಂದಿನ ಸಾಲಲ್ಲಿದ್ದವರು ಕುಳಿತುಕೊಳ್ಳಿ ಕಾಣುವುದಿಲ್ಲ ಎಂಬ ದೂರು, ಮಾತಿಗೆ ಮಾತು ಬೆಳೆದು ಅದು ಜಗಳವಾಗಿ ಮಾರ್ಪಾಡು. ಇತ್ತ ನಮಗೆ ಇವರ ಜಗಳ ನೋಡುವುದೋ ಮೆರವಣಿಗೆ ನೋಡುವುದೋ ಎಂಬ ಜಿಜ್ಞಾಸೆಯಲ್ಲಿ ಕೆಲವು ತಂಡ ಮುಂದೆ ದಾಟಿದ್ದು ಅರಿವಾಗಲಿಲ್ಲ! ಕೆಲವರು ನಾಲ್ಕೈದು ಖುರ್ಚಿಗಳನ್ನು ಒಂದರಮೇಲೊಂದು ಜೋಡಿಸಿ ಕೂತಿದ್ದರು. ಕುರ್ಚಿ ಕೊಡಿ ಎಂದು ನಯವಾಗಿ ಕೇಳಿದವರಿಗೆ ಕೊಡಲಿಲ್ಲ. ಕೆಲವರು ಜಬರ್ದಸ್ತಿನಿಂದ ಕೇಳಿದಾಗ ಎದ್ದು ಕೊಡುತ್ತಿದ್ದರು! ಜನರು ಪಾಪ್ಕಾರ್ನ್, ಚಿಪ್ಸ್, ತಂಪುಪಾನೀಯ ಇತ್ಯಾದಿ ಮೆಲ್ಲುತ್ತ, ಸವಿಯುತ್ತಲೇ ಇದ್ದರು. ತಿಂದು ಕಸ, ಪ್ಲಾಸ್ಟಿಕ್ ಗಳನ್ನು ಯಾವ ಮುಲಾಜು ಇಲ್ಲದೆ ಅಲ್ಲೇ ಬೀಸಾಡುತ್ತಿದ್ದರು. ಸ್ವಚ್ಛ ಭಾರತ ಕನಸಿನ ಮಾತೇ ಸರಿ ಎಂಬುದಕ್ಕೆ ಕೆಲವು ನಿಮಿಷಗಳಲ್ಲಿ ಅಲ್ಲಿ ಕಸದ ರಾಶಿ ಕಂಡೆವು. ಮಾರಾಟಗಾರರಿಗೆ ಭರ್ಜರಿ ವ್ಯಾಪಾರ. ಮೂಲ ಬೆಲೆಗಿಂತ ದುಪ್ಪಟ್ಟು ಕ್ರಯ ಹೇಳಿ ಮಾರುವುದು ಕಂಡಿತು! ಮನೆಯಲ್ಲೇ ಕುಳಿತು ಟಿವಿ ನೋಡುತ್ತಿದ್ದರೆ ಇಂಥ ಸ್ವಾರಸ್ಯ ಕಾಣಲು ಸಾಧ್ಯವೆ?!
ಅರಮನೆ ಎದುರು ಮೆರವಣಿಗೆ ಸಾಗುವ ದಾರಿಯಲ್ಲಿ ಪೊಲೀಸರದ್ದೇ ಕಾರುಬಾರು. ಹಿರಿಯ ಆರಕ್ಷಕ ಅಧಿಕಾರಿಗಳು ಎಷ್ಟೋಸಲ ಹಿಂದೆಹೋಗಿ ಎಂದು ಪೊಲೀಸರಿಗೆ ತಾಕೀತು ಮಾಡುತ್ತಿದ್ದುದು ಕಂಡಿತು. ಆಗ ಒಮ್ಮೆ ಹಿಂದೆ ಸರಿದರೂ ಕೆಲವೇ ನಿಮಿಷಗಳಲ್ಲಿ ಯಾಥಾಪ್ರಕಾರ. ಕೆಲವು ಕಲಾತಂಡಗಳು ನಮಗೆ ಕಾಣದೆ ಪೋಲೀಸರ ಖಾಕಿ ಮಾತ್ರ ಕಾಣುತ್ತಿದ್ದುದೂ ಇತ್ತು! ನನ್ನ ಕ್ಯಾಮರಾ ಕಣ್ಣಿಗೆ ಆರಕ್ಷಕರಿಲ್ಲದ ಒಂದು ಕಲಾ ತಂಡವೂ ಕಂಡಿಲ್ಲ!
ಮಧ್ಯಾಹ್ನ ೩.೧೦ಕ್ಕೆ ಅಂಬಾವಿಲಾಸ ಅರಮನೆ ಆವರಣದಲ್ಲಿ ೫೩ ವರ್ಷದ ಅರ್ಜುನ ಇದು ಮೂರನೇ ಸಲ ೭೫೦ಕಿಲೋ ತೂಕದ ಚಿನ್ನದ ಅಂಬಾರಿಹೊತ್ತು ತಯಾರಾದ. ಅವನ ಅಕ್ಕ ಪಕ್ಕ ಮೇರಿ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿದುವು. ೩.೧೭ಕ್ಕೆ ಮುಖ್ಯಮಂತ್ರಿಗಳು ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಅರ್ಜುನ ಗಾಂಭಿರ್ಯದಿಂದ ಮುಂದೆ ಹೆಜ್ಜೆಹಾಕಿದ. ಅರ್ಜುನ ಅಂಬಾರಿಹೊತ್ತು ಸಾಗುವಾಗ ಜನ ಭಕ್ತಿಯಿಂದ ಎದ್ದು ನಿಂತು ಕೈಮುಗಿದು ಜಯಕಾರ ಹಾಕುತ್ತಿದ್ದರು. ಜನರ ಶ್ರದ್ಧೆ ಭಕ್ತಿಯನ್ನು ಕಣ್ಣಾರೆ ಕಾಣಲು ಒಮ್ಮೆಯಾದರೂ ಖುದ್ದಾಗಿ ಮೆರವಣಿಗೆ ನೋಡಬೇಕು. ನಾವು ಎಲ್ಲ ಜನರು ಏಳುವ ಮೊದಲು ಎದ್ದು ಹೊರಬಂದು ಮನೆ ತಲಪಿದೆವು. ಸಂಜೆ ೪.೫೫ಕ್ಕೆ ಬನ್ನಿಮಂಟಪ ತಲಪಿತು. ಅಲ್ಲಿಗೆ ಮೆರವಣಿಗೆ ಮುಕ್ತಾಯ..

DSCN1148

 

DSCN1181

DSCN1173

DSCN1204

DSCN1286

DSCN1291

DSCN1323

DSCN1368

DSCN1379

ಪಂಜಿನ ಕವಾಯತು

ಪಂಜಿನ ಕವಾಯತು ಸಂಜೆ ೭ಕ್ಕೆ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಜರುಗುತ್ತದೆ. ಅಲ್ಲಿಯೂ ಜನಸಂದಣಿ ವಿಪರೀತವಿರುತ್ತದೆ. ಪಂಜಿನ ಕವಾಯತು ವೀಕ್ಷಿಸಲೂ ವೈಶಾಲಿ ಪ್ರವೇಶ ಚೀಟಿ ಕೊಟ್ಟಿದ್ದರು. ನಾವು ಸಂಜೆ ೫.೩೦ಕ್ಕೆ ಮನೆಯಿಂದ ಹೊರಟೆವು. ಬನ್ನಿಮಂಟಪದ ಬಳಿ ಬರುವಾಗ ಅಲ್ಲಿ ವಾಹನಗಳ ಸಂಖ್ಯೆ ಹೆಚ್ಚಿ ಸಂಚಾರದಟ್ಟಣೆ ಏರ್ಪಟ್ತಿತ್ತು. ಅಂಬಾರಿಯನ್ನು ಆನೆಯ ಬೆನ್ನಿಂದ ಇಳಿಸಿ ವಾಪಾಸು ಅರಮನೆಗೆ ತರಲು ಲಾರಿಯಲ್ಲಿ ಹಾಕಿ ಆಗಿತ್ತು. ಆ ಲಾರಿ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿತ್ತು! ಜನ ಭಕ್ತಿಯಿಂದ ಕೈಮುಗಿದು ರಸ್ತೆಪಕ್ಕ ಸಾಲಾಗಿ ನಿಂತಿದ್ದರು. ಬನ್ನಿಮಂಟಪಕ್ಕೆ ಪಂಜಿನ ಕವಾಯತು ನೋಡಲು ಹೋಗುವವರ ವಾಹನಗಳು ಸಾಲುಗಟ್ಟಿ ನಿಂತಿದ್ದುವು. ನಮ್ಮ ಸ್ಕೂಟರನ್ನು ಪಕ್ಕದ ರಸ್ತೆಗೆ ತಿರುಗಿಸಿ ಒಂಡು ಕಡೆ ನಿಲ್ಲಿಸಿ ನಡೆದು ಹೋಗಿ ಮೈದಾನ ಸೇರಿದೆವು. ಬೇಗ ಹೋದಕಾರಣ ಕೂರಲು ಸ್ಥಳ ಸಿಕ್ಕಿತ್ತು. ನೋಡ ನೋಡುತ್ತಿದ್ದಂತೆ ಖುರ್ಚಿಗಳೆಲ್ಲ ಭರ್ತಿಯಾದುವು. ಮೈದಾನದ ಸುತ್ತಲೂ ಜನರೋ ಜನರು.
ರಾಜ್ಯಪಾಲ ವಜುಬಾಯಿ ರೂಡಬಾಯಿ ವಾಲಾ ಅವರು ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಅವರು ತೆರೆದ ಜೀಪಿನಲ್ಲಿ ಮೈದಾನದ ಸುತ್ತ ಬಂದು ಜನರತ್ತ ಕೈಬೀಸಿದರು. ಅಶ್ವಾರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ರೈಲ್ವೇ ರಕ್ಷಣಾ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೆ ಎಸ್‌ಆರ್‌ಪಿಯ ೫ನೇ ತುಕಡಿ, ಗೃಹರಕ್ಷಕ ದಳ, ಭಾರತಸೇವಾದಳದ ಬಾಲಕ ಬಾಲಕಿಯರು, ಭಾರತ ಸ್ಕೌಟ್ ಮತ್ತು ಗೈಡ್ ತಂಡದ ಬಾಲಕ ಬಾಲಕಿಯರು, ವಿದ್ಯಾವಿಕಾಸ ಶಾಲೆಯ ವಿದ್ಯಾರ್ಥಿಗಳ ತಂಡ, ರಸ್ತೆ ಸುರಕ್ಷತೆಗಾಗಿ ವಿದ್ಯಾರ್ಥಿ ತಂಡಗಳು ರಾಜ್ಯಪಾಲರಿಗೆ ಗೌರವ ಸಲ್ಲಿಸಿದರು. ಎಲ್ಲ ತಂಡಗಳು ವಿಶಾಲವಾದ ಮೈದಾನದಲ್ಲಿ ಸಾಲಾಗಿ ಸಾಗುವುದನ್ನು ನೋಡುವುದೇ ಒಂದು ಖುಷಿ. ಮಿಲಿಟರಿ ಶ್ವೇತಾಶ್ವ ತಂಡ ಬೈಕ್ ಮೇಲೆ ಪ್ರದರ್ಶಿಸಿದ ಸಾಹಸಗಳನ್ನು ನೋಡಿ ರೋಮಾಂಚನವಾಯಿತು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಏಳು ಬೈಕುಗಳಲ್ಲಿ ೨೬ ಮಂದಿ ಪಿರಮಿಡ್ ಆಕೃತಿ ರಚಿಸಿದ್ದನ್ನು ನೋಡಿ ಮೂಗಿನಮೇಲೆ ಬೆರಳಿಟ್ಟೆವು! ಬೈಕ್ ಮೇಲೆ ಏಣಿಯಲ್ಲಿ ಬೈಕ್ ಚಲಿಸುತ್ತಲೇ ಏಣಿ ಏರುವ ಸಾಹಸ, ಬೆಂಕಿಯ ಉರುಳೊಳಗೆ ಬೈಕ್ ನುಗ್ಗಿಸುವ ಪರಿ, ಬೈಕಿನಲ್ಲಿ ಇಟ್ಟಿಗೆ ಗೋಡೆ ಭೇದಿಸಿದ ಸಾಹಸ ನೋಡಿ ಬೆರಗಾದೆವು. ಇಬ್ಬರು ಜೋಕರುಗಳು ಬೈಕಿನಲ್ಲಿ ನಾನಾ ಕಸರತ್ತು ಮಾಡಿ ನಗಿಸಿದರು.
ಅಸ್ಸಾಂ ರಾಜ್ಯದ ೩೦೦ ಕಲಾವಿದರು ಏಕಕಾಲದಲ್ಲಿ ಒಂದೇ ಮೈದಾನದಲ್ಲಿ ಬಿಹು ಜಾನಪದ ನೃತ್ಯ ಮಾಡಿದ್ದನ್ನು ಇದೇ ಮೊದಲಸಲ ನೋಡಿ ಶಹಭಾಸ್ ಎಂದೆವು. ಕರ್ನಾಟಕ ಜನಸಂಘ ಹಾಗೂ ಮಹಾರಾಣಿ ಮಹಿಳಾಕಾಲೇಜಿನ ಒಟ್ಟು ೫೫೦ ವಿದ್ಯಾರ್ಥಿಗಳು ಏಕಕಾಲದಲ್ಲಿ ದೇಶದ ವಿವಿಧ ನೃತ್ಯ ಪ್ರಾಕಾರಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಂದೇವೇದಿಕೆಯಲ್ಲಿ ನಡೆಸಿಕೊಟ್ಟರು.
ರಾಜ್ಯ ಸರಕಾರದ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳು ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ದಾಸವರೇಣ್ಯರ ಚಿತ್ರ ಲೇಸರ್ ಬೆಳಕಿನಲ್ಲಿ ಮೂಡಿ ಮಿಂಚಿನಂತೆ ಮರೆಯಾಯಿತು. ಆಗಾಗ ಟಾರ್ಚ್ ಲೈಟಿನ ಬೆಳಕು ಕಣ್ಣಾಮುಚ್ಚಾಲೆಯಾಡಿತು. ಮೈದಾನ ರಂಗು ರಂಗಾಗಿ ಕಾಣಿಸಿತು. ಇಷ್ಟೆಲ್ಲ ಆಗುವಾಗ ಗಂಟೆ ೮.೩೦. ಪೂರ್ತಿ ಮುಗಿಯುವವರೆಗೆ ಇದ್ದರೆ ಜನಸಾಗರದ ಮಧ್ಯೆ ಹೊರಬರಲು ತ್ರಾಸ ಪಡಬೇಕಾದೀತು ಹಾಗೂ ರಸ್ತೆಯಲ್ಲಿ ವಾಹನ ನಡೆಸುವುದು ಕಷ್ಟ ಎಂದು ಭಾವಿಸಿ ನಾವು ಎದ್ದು ಜನರ ನಡುವೆ (ಕಾಲು ಹಾಕಲು ಸ್ಥಳವಿಲ್ಲದಂತೆ ಜನ ನಿಂತಿದ್ದರು) ಕಷ್ಟಪಟ್ಟು ಹೊರಬಂದು ಮನೆ ಸೇರಿದೆವು. ಆಗ ರಸ್ತೆ ಬಿಕೋ ಎನ್ನುವಂತಿತ್ತು.
ಮುಖ್ಯಪಟ್ಟ ಪ್ರದರ್ಶನವಾದ ಪಂಜಿನ ಕವಾಯತನ್ನೇ ನಾವು ನೋಡಲಿಲ್ಲ! ೩೦೦ಕ್ಕೂ ಹೆಚ್ಚು ಆರಕ್ಷಕರು ‘ಸೀ ಯು ಇನ್ ೨೦೧೫’ ಎಂದು ಪಂಜು ಹಿಡಿದು ತೋರಿಸಿದ್ದರಂತೆ. ಅದನ್ನು ಮಾರನೇದಿನ ಪತ್ರಿಕೆಯಲ್ಲಿ ನೋಡಿ ಸಮಾಧಾನಪಟ್ಟೆವು!

 

DSCN1407

 

DSCN1401

 

DSCN1384DSCN1394

 

DSCN1575

DSCN1418

DSCN1439

DSCN1503

 

 

DSCN1541

DSCN1555

DSCN1640

DSCN1638

DSCN1615

 

DSCN1643

 

 

DSCN1597

Read Full Post »

ಮೈಸೂರಿನ ಕೃಷ್ಣಮೂರ್ತಿಪುರದಲ್ಲಿರುವ ಭಗಿನಿ ಸೇವಾ ಸಮಾಜ ಶಾಲೆಯಲ್ಲಿ 29.7.2014 ರಂದು ಬೆಳಗ್ಗೆ 10 ಗಂಟೆಗೆ ಹೆಂಗೆಳೆಯರ, ಮಕ್ಕಳ, ಗಂಡಸರ, ಪತ್ರಕರ್ತರ ದಂಡೇ ನೆರೆದಿತ್ತು. ಅಲ್ಲಿ ದೇಶೀ ಆಟಗಳ ಸ್ಪರ್ಧೆ ಏರ್ಪಡಿಸಿದ್ದರು.
Kunte Bille1ಡಾ. ಧರಣೀದೇವಿ ಮಾಲಗತ್ತಿ, (ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು) ಕುಂಟಬಿಲ್ಲೆ ಆಟದ ಬಿಲ್ಲೆ ಹಾಕುವ ಮೂಲಕ ರಾಜ್ಯಮಟ್ಟದ ದೇಶೀಯ ಆಟಗಳ ಜಾತ್ರೆಗೆ ಚಾಲನೆ ನೀಡಿದರು. ಪತ್ರಿಕಾ ಛಾಯಾಗ್ರಾಹಕರು ‘ಮೇಡಂ ದಯವಿಟ್ಟು ಈ ಆಟ ಆಡಿ ತೋರಿಸಿ’ ಎಂದು ಒತ್ತಾಯ ಮಾಡಿದರೂ ಧರಣೀದೇವಿ ಒಲ್ಲೆನೆಂದರು. ಕೊನೆಗೆ ಅವರ ಒತ್ತಾಯ ತಡೆಯಲಾರದೆ ಒಲ್ಲದ ಮನದಿಂದಲೇ ಚೌಕದ ಒಳಗೆ ಒಂದು ಕಾಲಿಟ್ಟರು. ಅಷ್ಟಕ್ಕೆ ತೃಪ್ತಿ ಹೊಂದಿ ಕ್ಲಿಕ್ ಕ್ಲಿಕ್ಕಿಸಿದರು. ಧರಣೀದೇವಿ ಮಾತಾಡುತ್ತ ದೇಶೀ ಆಟಗಳಲ್ಲಿ ಮಹಿಳೆಯರ ಆಟ, ಗಂಡಸರ ಆಟ ಎಂಬ ವರ್ಗೀಕರಣ ಇರಬಾರದು. ಎಲ್ಲ ಆಟಗಳನ್ನು ಇಬ್ಬರೂ ಆಡಬೇಕು ಎಂದು ಅಭಿಪ್ರಾಯಪಟ್ಟರು. ಒಂದೊಂದು ಜನಪದ ಆಟವೂ ಕೌಶಲ್ಯ ಬೆಳೆಸುವ ಆಟವಾಗಿರುವುದು ವಿಶೇಷ ಎಂದರು.
Chowka bharaಮನ್ವಂತರ ಸಮೂಹ ಬಳಗ, ಮೈಸೂರು ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವೆಂಕಟರಾಮ ಕಶ್ಯಪ್ ಅವರ ಪರಿಕಲ್ಪನೆ, ಸಂಯೋಜನೆ- ನಿರ್ವಹಣೆಯಲ್ಲಿ ಪಗಡೆ, 7 ಮನೆ ಚೌಕಾಭಾರ, ಅಳಗುಳಿ(ಚೆನ್ನೆ)ಮಣೆ, ಕುಂಟೆಬಿಲ್ಲೆ, ಇತ್ಯಾದಿ ಆಟಗಳು ನಡೆದುವು.ಚೌಕಾಭಾರ ಆಟವಾಡಲು ಸುಮಾರು 24 ಕ್ಕೂ ಹೆಚ್ಚುಮಂದಿ ಕುಳಿತಿದ್ದರು.ಇನ್ನೊಂದೆಡೆ ಅಳಗುಳಿಮಣೆ ಆಟ, ಮತ್ತೊಂದೆಡೆ ಪಗಡೆ ಆಟಗಳಿಗೆ ಏಕಕಾಲದಲ್ಲಿ ಚಾಲನೆ ದೊರೆಯಿತು. ಹೆಂಗಸರು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
Alaguliamaneಪ್ರತಿಯೊಂದು ಆಟಕ್ಕೂ ರೂ.  20 ಪ್ರವೇಶಧನ ನಿಗದಿಗೊಳಿಸಿದ್ದರು. ಒಬ್ಬರು ಎರಡು ಬಗೆಯ ಆಟ ಮಾತ್ರ ಆಡಲು ಅವಕಾಶವಿತ್ತು. ಅವರೆಲ್ಲರ ಈ ಸಂಭ್ರಮ ಉಲ್ಲಾಸಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಂತೋಷಿಸಿದೆ. ಮುಖ್ಯದ್ವಾರದಲ್ಲಿ ದಂಪತಿಗಳೊಬ್ಬರು ಬಂದ ಹೆಂಗಳೆಯರಿಗೆಲ್ಲ ಕುಂಕುಮ ಬಳೆ ಕೊಟ್ಟು ಸಂಭ್ರಮದಿಂದ ಸ್ವಾಗತಿಸಿದ್ದರು.
 ಇದು ಸುರಹೊನ್ನೆಯಲ್ಲಿ ಪ್ರಕಟಿತ. http://www.facebook.com/l/AAQGuQzmIAQH4QOyXCbclTTz6YacqLTQbFbpXN2N36h9Dlg/surahonne.com/?p=3926
.
ಹೆಚ್ಚಿನಚಿತ್ರಗಳು
DSCN9267
20140727_101112
20140727_110318
DSCN9244
DSCN9254
20140727_110719

Read Full Post »

ನಮ್ಮ ದೇಶದಲ್ಲಿ ಯಾವುದೇ ಮೌಲ್ಯದ ನೋಟನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ? ನೋಟಿನ ಮೇಲೆ ಯಾವುದೇ ಬರಹವನ್ನೂ ಬರೆಯಬಾರದು, ಬರೆದರೆ ಅದರ ಮೌಲ್ಯ ಹೋದಂತೆ ಎಂಬುದು ನಿಯಮ. ಆದರೆ ನಮ್ಮಲ್ಲಿ ಆ ನೀತಿ ಅನ್ವಯಿಸುವುದಿಲ್ಲ. ನೋಟಿನಲ್ಲಿ ಸಂಖ್ಯೆ ಇಲ್ಲವೇ ಒಬ್ಬೊಬ್ಬರ ಹೆಸರು ಕೂಡ ಇರುತ್ತದೆ. ಆದರೂ ಅದು ಚಲಾವಣೆಯಲ್ಲಿರುತ್ತದೆ.  ಇಲ್ಲೊಂದು ಹತ್ತು ರೂಪಾಯಿ ಮೌಲ್ಯದ ನೋಟು ನೋಡಿ. ಅಮರಪ್ರೇಮಿಯೊಬ್ಬ ಅದರಲ್ಲಿ ತನ್ನ ಪ್ರಿಯತಮೆ ಹೆಸರು ಬರೆದು ತನ್ನ ಪ್ರೀತಿಯನ್ನು ನಿವೇದಿಸಿಕೊಂಡ ಅಸಹ್ಯ ಬಗೆ ಇದು. ಆದರೂ ಈ ನೋಟು ಚಲಾವಣೆಗೊಂಡಿದೆ.

ಇದು ೨೦೧೧ ಜುಲೈ ೧೦ರ ಕರ್ಮವೀರದ ನೋಡಿಸ್ವಾಮಿ ಅಂಕಣದಲ್ಲಿ ಪ್ರಕಟಗೊಂಡ ಚಿತ್ರ ಬರಹ

DSCN2723

Read Full Post »

ವಿದ್ಯುತ್ ಕಡಿತ ಸಾಮಾನ್ಯ ಸಂಗತಿಯಾಗಿದೆ. ಅದಕ್ಕೇನು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು?  ನಾವು ಚಿಂತಿಸುವ ಗೊಡವೆಯೇ ಬೇಡ ಎಂದು ಮೈಸೂರು ಚೆಸ್ಕಾಂ ನಮಗೆ ಪರಿಹಾರ ಸೂಚಿಸಿದೆ. ವಿದ್ಯುತ್ ಶುಲ್ಕ ಕಟ್ಟಿದ್ದಕ್ಕೆ ನಮಗೆ ಚೆಸ್ಕಾಂ ರಶೀದಿ ನೀಡುತ್ತದೆ.  ಆ ರಶೀತಿಯ ಹಿಂಬದಿ ಒಂದು ಜಾಹೀರಾತು. `ನೀವು ಪವರ್ ಕಟ್ ನಿಂದ ಚಿಂತಿತರಾಗಿದ್ದೀರ? ಮನೆಗೆ ತನ್ನಿ ವೆಪ್ ಹೋಮ್ ಯುಪಿ‌ಎಸ್.’ ಎಂಬುದಾಗಿ ಒಂದು ಯುಪಿ‌ಎಸ್ ಕಂಪನಿಯ ಜಾಹೀರಾತು  ನಮ್ಮ  ಕಣ್ಣಿಗೆ ಕುಕ್ಕುತ್ತದೆ.   ಇದು ಚೆಸ್ಕಾಮ್ ನ ಸೇವೆಯ ವೈಪರೀತ್ಯ ಎನ್ನೋಣವೇ?

OLYMPUS DIGITAL CAMERA

 

 

 

 

 

 

 

 

ಇದು  ೨೦೧೧ ಜೂನ್೧೯ ಕರ್ಮವೀರದ ನೋಡಿಸ್ವಾಮಿ ಅಂಕಣದಲ್ಲಿ  ಪ್ರಕಟಗೊಂಡ ಚಿತ್ರ ಬರಹ

 

 

 

 

Read Full Post »