Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಅನಂತ ಪತ್ರ’ Category

(ಜಿ.ಎನ್. ಅನಂತವರ್ಧನ ವಿಜಯ ಕರ್ನಾಟಕದಲ್ಲಿ ಬರೆದ ಕಾಗದ.  ಇವರು ನನ್ನ ಗಂಡ. ಮೈಸೂರಿನಲ್ಲಿ CA ಆಗಿ ಕೆಲಸ ಮಾಡುತ್ತಿದ್ದಾರೆ.)

ಶ್ರೀ ಪ್ರತಾಪ ಸಿಂಹ ಅವರು ಬರೆದ   ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಬರೆದ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ದಿ. ವಿ.ಪಿ. ಸಿಂಗ್, ಶ್ರೀ ಯಡಿಯೂರಪ್ಪ ಅವರ ಬಗ್ಗೆ ಬರೆದ ಲೇಖನ ಸಮಗ್ರವಾಗಿತ್ತು.ಹೆಗ್ಗಡೆಯವರ ಸಾಧನೆಗಳ ಬಗ್ಗೆ ಬರೆದದ್ದು ಅಪೂರ್ಣವಾಗಿತ್ತು. ಟೀಕೆ ಮಾಡಲು ತೋರುವ ಕಾಳಜಿಗಿಂತ ಪ್ರಶಂಸಿಸಲು ಬರೆದ ಲೇಖನ ಏಕೆ ಬಡವಾಯಿತು? ಇರಲಿ. ಹೊಗಳಿಕೆ ಹಿತಮಿತವಾಗಿರಬೇಕು.

ನನಗೆ ಗೊತ್ತಿದ್ದ ಕೆಲವು ವಿಷಯಗಳನ್ನು ಇಲ್ಲಿ ಬರೆಯುತ್ತೇನೆ. ೧೯೯೨-೯೩ ರಿಂದಲೇ ಪ್ರತೀವರ್ಷ ಸುಮಾರು ೩ ಕೋಟಿ ರೂಪಾಯಿಗಳನ್ನು ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ದೇವಾಲಯದ ಸ್ಥಳಾಂತರ, ಜೀರ್ಣೋದ್ಧಾರದಿಂದ ಆರಂಭಗೊಂಡ ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಇದುವರೆಗೆ ಸುಮಾರು ೫೦೦ಕ್ಕು ಮಿಕ್ಕಿ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿದೆ. (ನಿಖರವಾದ ಸಂಖ್ಯೆಗಳು ಎಷ್ಟೆಂದು ತಿಳಿಯಬೇಕಾದರೆ ಬೆಂಗಳೂರಿನ ಎಫ್ ಎಮ್ ಕಾರ್ಯಪ್ಪ ರಸ್ತೆಯಲ್ಲಿಯ ಕಛೇರಿಯಲ್ಲಿ ತಿಳಿಯಬಹುದು.) ಪ್ರತೀ ದೇವಾಲಯದ ಜೀರ್ಣೋದ್ಧಾರದ ಒಟ್ಟು ಖರ್ಚಿನ ೪೦% ಸ್ಥಳೀಯರು ವಹಿಸಿಕೊಳ್ಳಬೇಕು. ಉಳಿದ ಮೊತ್ತವನ್ನು ನ್ಯಾಸವೇ ಭರಿಸುತ್ತದೆ. ಪರಿಣತ ಕೆಲಸಗಾರರು, ಅಭಿಯಂತರರು, ಯಂತ್ರೋಪಕರಣಗಳನ್ನು ಹೊಂದಿದ್ದು ನ್ಯಾಸದವರೇ ಕಾಮಗಾರಿ ಕೆಲಸಗಳನ್ನೂ ಮಾಡಿಸುತ್ತಾರೆ. ಕರ್ನಾಟಕದಾದ್ಯಂತ ಹಾಗೂ ರಾಜಸ್ತಾನ, ಇತರೆ ರಾಜ್ಯಗಳ ಸ್ಥಳೀಯರ ಅರ್ಜಿಗಳನ್ನು ಪರಿಶೀಲಿಸಿ ಕಾರ್ಯೋನ್ಮುಖರಾಗುತ್ತಾರೆ.

(ಹೆಚ್ಚು…)

Read Full Post »

« Newer Posts