Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಅನಂತ ಪತ್ರ’ Category

ಆಯುಧಗಳನ್ನು ಬಳಸದೆ ಸ್ವಸಾಮರ್ಥ್ಯದಿಂದ ಶಕ್ತಿ ಯುಕ್ತಿ ಬಳಸಿ ಇನ್ನೊಬ್ಬನೊಡನೆ ಗೆಲ್ಲುವ ಕ್ರೀಡೆಯೇ ಕುಸ್ತಿ. ಭಾರತದಲ್ಲಿ ರಾಮಾಯಣ ಮಹಾಭಾರತ ಕಾಲದಿಂದಲೂ ಕುಸ್ತಿ ಪ್ರಸಿದ್ಧಿ ಹೊಂದಿದೆ. ವಾಲಿ-ಸುಗ್ರೀವ, ಭೀಮ- ಹಿಡಿಂಬ, ಬಕ, ಕೀಚಕ, ಜರಾಸಂಧ, ಆಂಜನೇಯ, ದುರ್ಯೋಧನ, ಕಿರಾತಾರ್ಜುನ, ಕೃಷ್ಣ, ಜಾಂಬವ ಇತ್ಯಾದಿ ಪುರಾಣಾಂತರ್ಗತವಾಗಿವೆ. ಸಳನೆಂಬ ಸಾಮಾನ್ಯ ಬಾಲಕ ತನ್ನ ಗುರುವಿನ ಅಣತಿಯಂತೆ ಸಮಯಸ್ಫೂರ್ತಿಯಿಂದ ಹುಲಿಯೊಂದನ್ನು ಸಂಹರಿಸಿದ್ದು ಹೊಯ್ಸಳ ರಾಜ್ಯಕ್ಕೆ ಬುನಾದಿ ಆದದ್ದು ಚರಿತ್ರೆ. ಸಳನೂ ಉತ್ತಮ ಕುಸ್ತಿಪಟು ಆಗಿದ್ದಿರಲೇಬೇಕು. ಕಂಠೀರವ ನರಸರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆಂದು ಕೈಗೊಂಡ ಪಂಚ ಕಲ್ಯಾಣ ಯೋಜನೆಯಲ್ಲಿ ದೇಹದ ಸ್ವಾಸ್ಥ್ಯಕ್ಕೆ ಗರಡಿ, ಆಧ್ಯಾತ್ಮಕ್ಕೆ ರಾಮಮಂದಿರ, ನ್ಯಾಯಕ್ಕೆ ಅರಳಿಕಟ್ಟೆ, ಕೃಷಿಗೆ ಗೋಶಾಲೆ ಮತ್ತು ಗ್ರಾಮಕ್ಕೆ ಕೆರೆ ಸ್ಥಾಪಿಸಿದ್ದು ಇಂದಿಗೂ ಪ್ರತೀ ಗ್ರಾಮಗಳಲ್ಲಿಯ ಗ್ರಾಮದೇವತೆ ಹಬ್ಬಗಳಲ್ಲಿ ಮಹಿಳೆಯರಿಗೆ ಪೂಜೆ ಪುನಸ್ಕಾರ, ಅತಿಥಿ ಸತ್ಕಾರ, ಹಿರಿಯರಿಗೆ ನಾಟಕ, ಕಿರಿಯರಿಗೆ ಕುಸ್ತಿಯೇ ಪೂಜೆ. ರಕ್ಷಣಾ ಇಲಾಖೆಯಲ್ಲಿ ಆದ್ಯತೆ ಮೇರೆಗೆ ಕುಸ್ತಿಪಟುಗಳು ನೇಮಕಗೊಳ್ಳುವುದು ರಾಜರ ಕಾಲದಿಂದಲೂ ನಡೆಯುತ್ತಿದ್ದುದು, ಇಂದಿಗೂ ಅದು ರೂಢಿಯಲ್ಲಿದೆ. ನಲವತ್ತು ಅಡಿಯ ಸುತ್ತಳತೆಯ ಕೆಂಪು ಮಣ್ಣಿನಲ್ಲಿ ಕುಂಕುಮ ಕೇಸರಿ ಔಷಧೀಯ ಸಸ್ಯಗಳ ಮಿಶ್ರಣದ ಅಲಂಕೃತ ಅಖಾಡದಲ್ಲಿ, ಸುತ್ತಲೂ ಪ್ರೇಕ್ಷಕರ ಜಯಘೋಷದಲ್ಲಿ ತೀರ್ಪುಗಾರರು, ಗುರುಗಳು, ಉಸ್ತಾದರು, ಯಜಮಾನರು, ಮುಖಂಡರು, ಗಣ್ಯರನ್ನೊಳಗೊಂಡ ಕುಸ್ತಿ ಸಚಿವಾಲಯದ ಸಮ್ಮುಖದಲ್ಲಿ ನಿಯಮದಂತೆ ಕುಸ್ತಿ ಪಂದ್ಯಾವಳಿ ನಡೆಯುವುದು.


ಪ್ರತಿಯೊಬ್ಬ ಕುಸ್ತಿ ಪಟುವಿನಲ್ಲಿರಬೇಕಾದದ್ದು ಶಕ್ತಿ, ದಮ್ಮುಕಸ್ತು, ಪಟ್ಟುಗಳು (ಡಾವುಗಳು) ಹಾಗೂ ಚತುರತೆ. ಶಕ್ತಿಗೆ ಕಠಿಣ ಆಹಾರಕ್ರಮವಾದರೆ, ದಮ್ಮುಕಸ್ತಿಗೆ ಪ್ರಾಣಾಯಾಮ ಅತ್ಯವಶ್ಯ. ಡಾವುಗಳಲ್ಲಿ ಶಕ್ತಿ ಪ್ರಧಾನವಾದುದು ಭೀಮಸೇನೀ, ಯುಕ್ತಿ ಪ್ರಧಾನವಾದುದು ಹನುಮಂತೀ. ಕೈಕಾಲು ಮುರಿಯುವಂತದ್ದು ಜಾಂಬವತೀ, ಎಲ್ಲವೂ ಮಿಶ್ರಿತವಾದುದು ಜರಾಸಂಧೀ. ಸುಮಾರು ೧೪೬ ಡಾವುಗಳನ್ನು ಗುರುತಿಸಲಾಗಿದ್ದು, ಈಗ ಕೇವಲ ೧೦-೧೫ ರೂಢಿಯಲ್ಲಿವೆ. ನಿಗದಿತ ಸಮಯದೊಳಗೆ ಚಿತ್ ಮಾಡಿದಾಗ (ಬೆನ್ನು ಮಣ್ಣಿಗೆ ಮುಟ್ಟಿಸುವುದು) ಸೋಲು ಗೆಲುವು ನಿರ್ಧಾರವಾಗುತ್ತದೆ.
ಹೊಯ್ಸಳ ರಾಜ ಬಲ್ಲಾಳ ೨ ಮೈಸೂರು ತಾಲೂಕಿನ, ಕೆ.ಹೆಮ್ಮನಹಳ್ಳಿಯಲ್ಲಿ (ಬೋಗಾದಿ ರಸ್ತೆ ೯ನೇ ಕಿ.ಮೀ) ಕ್ರಿ.ಶ. ೧೧೮೮ರಲ್ಲಿ ಸ್ಥಾಪಿಸಿದ ಶ್ರೀ ಮಹಾಲಿಂಗೇಶ್ವರ ದೇವಾಲಯವು ಸಳನ ಕ್ಷಾತ್ರತ್ವವನ್ನು ನೆನೆಸಿ ಉಳಿಸಿ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ನ್ಯಾಸದ ವತಿಯಿಂದ ೧೯೯೪ರಲ್ಲಿ ಮಹಾಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರಗೊಳಿಸಿದಂದಿನಿಂದಲೂ ಪ್ರತೀಯುಗಾದಿಗೆ ರಾಜ್ಯಮಟ್ಟದ ನಾಡಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸುತ್ತ ಬಂದಿರುತ್ತದೆ. ಈ ಸಲದ ಪಂದ್ಯಾವಳಿ ೨೫-೩-೨೦೧೨ ಭಾನುವಾರ ಅಪರಾಹ್ಣ ೨.೩೦ರಿಂದ ೩೦ ಜೋಡಿಗಳಿಂದ ನಡೆಯಲಿದೆ.  ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘದ ಪ್ರಧಾನ ಕಾರ್ಯದರ್ಶಿ ಯ/ಪೈ/ಎನ್. ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವುದು. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುತ್ತದೆ. ಉಚಿತ ಪ್ರವೇಶ.

೧   ಬೋಗಾದಿ ಚೇತನ್             *      ರಮ್ಮನಹಳ್ಳಿ ಪ್ರತಾಪ
೨  ಶ್ರೀರಂಗಪಟ್ಟಣ ಮಂಜುನಾಥ      *      ಮೇಳಾಪುರ ವಿನಯಕುಮಾರ್
೩   ನಗುವಿನಹಳ್ಳಿ ಮೋಹನಕುಮಾರ್   *     ಕ್ಯಾತಮಾರನಹಳ್ಳಿ ಸುರೇಶ
೪    ಉದ್ಬೂರು ವೆಂಕಟೇಶ            *     ಮೈಸೂರು ಪ್ರಶಾಂತನಾಯಕ
೫   ಕ್ಯಾತಮಾರನಹಳ್ಳಿ ಮಂಜುನಾಥ      *     ಲಕ್ಷ್ಮೀಪುರ ಹೇಮಂತಕುಮಾರ್
೬   ಕ್ಯಾತಮಾರನಹಳ್ಳಿ ದೇವರಾಜು      *       ಮೈಸೂರು ಕೃಷ್ಣ ಮೇಟಗಳ್ಳಿ
೭   ಮೈಸೂರು ವಿಜಯ್             *      ಬೋಗಾದಿ ತ್ಯಾಗರಾಜು
೮    ಕ್ಯಾತಮಾರನಹಳ್ಳಿ ಮಹೇಂದ್ರ     *       ಹುಲ್ಲಿನಬೀದಿ ರವೀಂದ್ರ
೯   ನಗುವಿನಹಳ್ಳಿ ಮಂಜುನಾಥ        *      ರಮ್ಮನಹಳ್ಳಿ ವಿಜಿ
೧೦   ಮೇಳಾಪುರದ ದೀಪಕ್          *     ಹೊಸುಂಡಿ ಚಂದ್ರ
೧೧   ನಗುವಿನಹಳ್ಳಿ ನವೀನ           *     ಉದ್ಬೂರು ಮಹದೇವ
೧೨   ಜಿ.ಬಿ. ಸರಗೂರು ಮಹೇಶ       *     ರಮ್ಮನಹಳ್ಳಿ ಗೋಪಾಲ
೧೩  ಮಹದೇವಪುರ ದೇವರಾಜು       *    ಉದ್ಬೂರು ಸುಂದರ
೧೪  ಕ್ಯಾತಮಾರನಹಳ್ಳಿ ಬಸವರಾಜು     *    ಬೋಗಾದಿ ಪ್ರಸನ್ನ
೧೫  ಜಿ.ಬಿ. ಸರಗೂರು ಅಶೋಕ      *    ಮೇಳಾಪುರ ಪವನಕುಮಾರ
೧೬    ಬೋಗಾದಿ ಮಂಜು             *    ಜಟ್ಟಿಹುಂಡಿ ಭೈರವ
೧೭   ಕ್ಯಾತಮಾರನಹಳ್ಳಿ ಜಗದೀಶ       *    ನಂಜನಗೂಡು ಶ್ರೀಕಂಠ
೧೮   ಕ್ಯಾತಮಾರನಹಳ್ಳಿ ರಮೇಶ        *    ಬೋರೆ ಆನಂದೂರು ಪಾಪಣ್ಣ
೧೯   ಬೋಗಾದಿ ಮಂಜೇಶ            *    ಶ್ರೀರಂಗಪಟ್ಟಣ ಶ್ರೀನಿವಾಸ
೨೦   ಬೋಗಾದಿ ರವಿಕಿರಣ            *     ನಂಜನಗೂಡು ಗುರುಪ್ರಸಾದ
೨೧   ಅಶೋಕಪುರ ಕಿರಣ ಆರ್        *    ಉದ್ಬೂರು ಗಿರೀಶ
೨೨   ಚಂದಗಾಲದ ಸೀನ              *     ಕೆ.ಹೆಮ್ಮನಹಳ್ಳಿ ಸೋಮು
೨೩   ಸುಣ್ಣದಕೇರಿ ವಾಸಿಂಪಾಷ         *     ಗಾಂಧಿನಗರ ಕೆ.ಕಿರಣ
೨೪   ಮೈಸೂರು ಅಮೃತಕುಮಾರ      *     ಬೋಗಾದಿ ರಘು
೨೫    ಚಂದಗಾಲದ ರಾಜ             *   ನಂಜನಗೂಡು ಗುರು
೨೬   ಬೋಗಾದಿ ಸಿ. ಕುಮಾರ            *    ಕ್ಯಾತಮಾರನಹಳ್ಳಿ ಗುರು
೨೭   ನಗುವನಹಳ್ಳಿ ಶೇಖರ್            *     ನಂಜನಗೂಡು ಶಿವಕುಮಾರ
೨೮  ಹೆಬ್ಬಾಡಿಹುಂಡಿ ಸಿದ್ದಿಕ್ ಪಾಷಾ      *     ಲಕ್ಷ್ಮೀಪುರ ರಾಘವೇಂದ್ರ
೨೯ ಉದ್ಬೂರು  ವಾಸು                *     ನಗುವನಹಳ್ಳಿ ವಿನಯಕುಮಾರ
೩೦ ಬೋಗಾದಿ ಶಂಕರ್                *      ಭೂತನಪುರ ಎಂ ದೀಕ್ಷಿತ್

ಜಿ.ಎನ್. ಅನಂತವರ್ಧನ
ಮನೆ ಸಂಖ್ಯೆ ೮ ಅತ್ರಿ ಕಾಮಾಕ್ಷಿ ಆಸ್ಪತ್ರೆ ರಸ್ತೆ,

ಸರಸ್ವತೀಪುರ,

ಮೈಸೂರು ೫೭೦೦೦೯, ೯೪೪೯೨೬೪೯೨೦

Read Full Post »

MYSURU KUSTI, HOYSALA VALOUR

     Wrestling is a sport where one person wins over the other with his own strength & intelligence, without using any weapons. Its existence is traced to Ramayana & Mahabharatha period. Famous bouts are of Vaali-Sugreeva, Bhima- Hidimba, Baka, Keechaka, Jharasandha, Anjaneya, Duryodhana; Keeraatharjuna, Krishna-Jambava etc. The birth of Hoysala dynasty starts from Sala, a common lad who killed a tiger instantaneously at the orders of his guru, is now history. Sala probably must be a wrestler. You can find even today the Five-point program introduced by Kanteerava Narasaraja Wadeyar for the welfare of villagers in every villages of  Mysuru: Garadi for body health; Rama Mandira for mental peace; Aralikatte for settling disputes, rendering justice; Goshalas for agriculture and pond for the village. In every annual village  fairs, women would be engaged in religious activities, elderly people in mythological dramas whereas for the young, this wrestling competitions would be puje. Wrestlers were being preferred for the defence of the kingdom which are even now followed.

Traditional wrestling, called as Naada Kusti, will be held on a 40feet diameter round soft mud heap, called as Akhada, as per strict traditional rules. It will be mixed with kukum, kesari and other medicinal preparations and decorated like a god. It will be surrounded by enthusiastic audience, judges, gurus, ustads, chieftans, leaders, dignatories etc called as the ‘Kusti Sachivaalaya’.

A wrestler should possess strength(energy, stamina), resistance power, techniques and intelligence. Strict food habits are compulsory for conserving energy and breathing exercises(pranayaama) for resistance power. Techniques (also called as pattu or daavu) are classified as Bhimaseni, where energy is prominent, anjaneya where intelligence is important, Jambhavanthi where arms & legs break and Jharasandhi, where the above three are mixed. Around 146 such daavus are identified whereas about 10-15 are in present day use. Forcing the opponent to touch the back decides who have won.

In order to preserve and carry to the posterity the valour of Sala, Sri Mahalingeshwara temple in K. Hemmanahalli(bhogadi rd 9th km) established by Hoysala King Ballala II  in 1188 AD, since Sri Dharmasthala Manjunatheshwara Dharmothana Trust renovated it in 1994 is conducting these wrestling competitions during yugaadi festival. This year it will be held jointly with Youth Services & Sports Dept, Mysore Dt on 25-3-2012 Sunday 2.30 pm onwards where five major pairs and 25 other pairs will compete under the leadership of Y|P| S. Mahadev, secretary of Sri Jayachamaraja Wadeyar Garadi Sangha. Seating arrangements are made for the public. Entry free.

The five pairs are Bhogadi Chethan x Ramannalli Prathap;

Srirangapatna Manjunath x Melapura Vinaykumar;

Naguvinahalli Mohankumar x Kyatamaranahalli Suresh;

Udbur Venkatesh x Mysuru Prashanthanayak and

Kyathamarnahalli Manjunath x Lakshmipura Hemanthkumar.

Remaining 25 pairs are Kyathamarnalli Devarju x Mysuru Krishna Metagalli; Mysuru Vijay x Bhogadi Thyagaraju;

Kyathamaranalli Mahendra x Hullinabeedhi Ravindra;

Naguvihanahalli Manjunath x Ramannalli Viji;

Melapura Deepak x Hosundi Chandru;

Naguvinahalli Naveena x Udburu Mahadeva;

GB Sargur Mahesh x Ramannalli Gopala;

Mahadevapura Devaraju x Udburu Sundara;

Kyathamarnahalli Basavaraju x Bhogadi Prasanna;

GB Sarguru Ashok x Melapura Pavanakumar;

Kyathmaranalli Jagadisha x Nanjangudu Srikanta;

Kyathmaranahalli Ramesh x Bore Anandaru Papanna;

Bhogadi Manjesha x Srirangapatna Srinivasa;

Bhogadi Ravikirana x Nanjangudu Guruprasada;

Ashokapura Kiran. R x Udbur Girish;

Chandagala Seena x KHemmanahalli Soma;

Chandagala Raja x Nanjangudu Guru;

Sunnadakeri Wasimpasha x Gandhinagar K. Kiran;

Mysuru Amruthkumar x Bhogadi Raghu;

Bhogadi C. Kumar x Kyathamarnalli Guru;

Naguvinahalli Shekar x Nanjangudu Shivakumar;

Hebbadihundi Siddiqa pasha x Lakshmipura Raghavendra;

Udburu Vaasu x Naguvinahalli Vinayakumar,

Bhogadi Shankar x Mysuru M. Dixith and

Bhogadi Manju x Jettihundi Bhairava.

                                                                               GN Anantavardhana,

                                                                                   Secretary,

                                                                                   Mob: 9449264920

                                                                              Sri Mahalingeshwara Temple,

                                                                              K. Hemmanahalli, Mysore tq

Read Full Post »

ಮೈಸೂರು ತಾಲೂಕು ಕೆ.ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ೧೭ನೇ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಪ್ರಯುಕ್ತ ೨೭.೩.೨೦೧೧ರಂದು ಮೈಸೂರಿನ ಜಯಚಾಮರಾಜ ಒಡೆಯರ್ ಗರಡಿ ಸಂಘದ ಪ್ರಧಾನ ಕಾರ್ಯದರ್ಶಿ ಪೈಲ್ವಾನ್ ಎಸ್. ಮಹಾದೇವ್ ಅವರ ನಿರ್ದೇಶನದಲ್ಲಿ ೨ ಜೊತೆ ಮಾರ್ಫಿಟ್ ಕುಸ್ತಿ ಹಾಗೂ ೨೩ ಜೊತೆ ಕಾಟಾ ಕುಸ್ತಿ ನಡೆಯಿತು. ವೈಭವದ ಮೆರವಣಿಗೆಯಲ್ಲಿ ಯೋಗ ಗುರು ಪತಂಜಲಿ ಮಹರ್ಷಿಗಳ ವಿಗ್ರಹವನ್ನು ತಂದು ಅಂಬಾಭಾವಾನಿಯ ಪೂಜೆಯೊಂದಿಗೆ ಕುಸ್ತಿಗೆ ಚಾಲನೆ ಕೊಡಲಾಯಿತು. ಮೈಸೂರುಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಪಾದಕರಾದ ಶ್ರೀ ಕೆ.ಬಿ ಗಣಪತಿ ಮಾತನಾಡುತ್ತ, `ಗ್ರಾಮೀಣ ಜನರ ಅಪ್ರತಿಮ ಕ್ರಿಯಾಶಕ್ತಿ ಕೃಷಿಯೇತರ ಚಟುವಟಿಕೆಗಳು ಈ ಜಾನಪದ ಕಲೆಗಳು. ಹಿಂದೆ ಯುದ್ಧಕೌಶಲಕ್ಕೆ ಅನಿವಾರ್ಯವಾಗಿದ್ದ ಮಲ್ಲಯುದ್ಧ ಇಂದು ಪ್ರದರ್ಶನ ಕಲೆಯಾಗಿ ನಾಡ ಕುಸ್ತಿಯಾಗಿ ಜನಪ್ರಿಯಗೊಂಡಿರುವುದು ಬಹಳ ಸಂತೋಷದ ವಿಷಯ’ ಎಂದರು. ವಕೀಲರಾದ ಒ. ಶಾಮ ಭಟ್ ಎಲ್ಲರನ್ನೂ ಸ್ವಾಗತಿಸಿದರು.

ಮಲ್ಲಯುದ್ಧ

ಪಲ್ಟಿ

ಜೆ ಮಂಜುನಾಥ ಕ್ಯಾತಮಾರನ ಹಳ್ಳಿ ಹಾಗೂ ಮಂಜು ಹುಣಸೂರು ಇವರ ಮಧ್ಯೆ ಸೋಲು ಗೆಲುವಿನ ತನಕ ಮಾರ್ಫಿಟ್ ಕುಸ್ತಿ ಎಂದು ನಿಗದಿಯಾಗಿದ್ದರೆ ಕೆಲವೇ ಸೆಕೆಂಡುಗಳಲ್ಲಿ ಜೆ ಮಂಜುನಾಥ ಎದುರಾಳಿಯನ್ನು ನೆಲಕ್ಕೆ ಒಗೆದು ಗೆಲುವಿನ ನಗೆ ಬೀರಿದರು. ಪ್ರೇಕ್ಷಕರು ನಿರಾಸೆಗೊಂಡರು.
ಆರ್ ಕಾರ್ತಿಕ್ ಭೋಗಾದಿ, ವಿರುದ್ಧ  ಪ್ರತಾಪ ರಮ್ಮನಹಳ್ಳಿ, ಹರ್ಷ ಹುಣಸೂರು ವಿರುದ್ಧ ಎಸ್ ರಘು ಭೋಗಾದಿ, ಉಮೇಶ ನಂಜನಗೂಡು ವಿರುದ್ಧ ಎಸ್ ಮಧು ಭೋಗಾದಿ, ಆರ್ ಅರುಣ ಮರಟಿಕ್ಯಾತನಹಳ್ಳಿ ವಿರುದ್ಧ ಯೋಗೇಶ್ ಕಳಲೆ,  ಈರಣ್ಣನಾಯಕ ನಂಜನಗೂಡು ವಿರುದ್ಧ ಬಸವೇಶ ಭೋಗಾದಿ, ರಾಘವೇಂದ್ರ ಲಕ್ಷ್ಮೀಪುರ ವಿರುದ್ಧ ಕಾರ್ತಿಕ ಹುಣಸೂರು,  ಸೈಯದ್ ಇಸ್ತಫರ್ ಮೈಸೂರು ವಿರುದ್ಧ ಪ್ರದೀಪ ನಗರ್ಲೆ, ಶಿವು ಹುಣಸೂರು ವಿರುದ್ಧ ಮಂಜುನಾಥ ನಂಜನಗೂಡು, ಕೃಷ್ಣಕುಮಾರ್ ಹುಣಸೂರು ವಿರುದ್ಧ ದಿವಾಕರ ಕ್ಯಾತಮಾರನಹಳ್ಳಿ, ಮೆಹಬೂಬ್ ನಂಜನಗೂಡು ವಿರುದ್ಧ ಕುಮಾರ ಹುಣಸೂರು, ಚೆನ್ನ ರಮ್ಮನಹಳ್ಳಿ ವಿರುದ್ಧ ಚಿಕ್ಕ ಹುಣಸೂರು, ಅರ್ಜುನ ಹುಣಸೂರು ವಿರುದ್ಧ ಬಿ. ವಿಜಯ ಮೈಸೂರು ಸೆಣಸಾಡಿ ಗೆದ್ದರು.
ರವಿ ರಮ್ಮನಹಳ್ಳಿ * ಎಸ್ ಮಂಜು ಭೋಗಾಧಿ, ಮಂಜು ನಂಜನಗೂಡು * ಪ್ರಕಾಶ ಕ್ಯಾತಮಾರನಹಳ್ಳಿ, ಎಂ.ಜಿ. ಚೇತನ ಭೋಗಾದಿ * ಶಿವಕುಮಾರ ಹಳ್ಳದಕೇರಿ, ಸೋಮಶೇಖರ ಹುಣಸೂರು * ಎಸ್.ಎಸ್. ಮಹದೇವಸ್ವಾಮಿ ಸುತ್ತೂರು, ಅಶೋಕ ಸರಗೂರು * ರಾಕೇಶ ಹುಣಸೂರು, ಎಸ್ ಸೋಮ ಕೆ.ಹೆಮ್ಮನಹಳ್ಳಿ * ಸಿದ್ಧರಾಜು ದಾಸನಕೊಪ್ಪಲು, ಪ್ರಸನ್ನ ದಾಸನಕೊಪ್ಪಲು * ಕುಳ್ಳ ಗೋಳೂರು ಇವರೆಲ್ಲರ ಮಧ್ಯೆ ರೋಚಕ ಸ್ಪರ್ಧೆ ನಡೆದು ಫಲಿತಾಂಶ ಸಮವಾಯಿತು.  ಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಕುಸ್ತಿ  ನೋಡಿ ಹಾಕ್ಲ ಮಗ ಹಾಂಗೆ ಬೆನ್ನು ಮುಟ್ಟಿಸು ಎಂದು ಕುಸ್ತಿಪಟುಗಳನ್ನು ಚಪ್ಪಾಳೆತಟ್ಟಿ ಹುರುದುಂಬಿಸಿದರು.

ಕುಸ್ತಿ ನೋಡುತ್ತಿರುವ ಜನಸಾಗರ

ಮಾರ್ಫಿಟ್ ಕುಸ್ತಿಗೆ ಶರತ್ ಕುಂಬಾರಕೊಪ್ಪಲು ಬಹಿರಂಗ ಸವಾಲು ಹಾಕಿದಾಗ  ಮನು ಸೀತಾಪುರ ಸವಾಲನ್ನು ಸ್ವೀಕರಿಸಿದರೂ ಶರತ್‌ಗೆ ಶರಣಾಗಬೇಕಾಯಿತು.

ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗಶಿಕ್ಷಣ ಸಮಿತಿಯ ಯೋಗಶಿಕ್ಷಕ ಶ್ರೀ ರವಿಕುಮಾರ್ , `ಕುಸ್ತಿ ಜನರನ್ನು ಸಂಘಟಿಸಿ, ಸಂಘಟನಾ ಶಕ್ತಿಯನ್ನು ವರ್ಧಿಸುತ್ತದೆ. ಇದರಿಂದ  ದೇಶ ಶಕ್ತಿಯುತವಾಗುವುದು’ ಎಂದು ಎಲ್ಲರಿಗೂ ಶುಭ ಹಾರೈಸಿದರು. ವಕೀಲರಾದ ಬಸವರಾಜ್, ಸನದು ಲೇಖಾಪಾಲರಾದ ಎಸ್. ಅಚ್ಯುತ ಹಾಗೂ ಹಲವರು ತೀರ್ಪುಗಾರರಾಗಿ ಭಾಗವಹಿಸಿದರು.  ಶಂಕರ, ಶರ್ಮ, ಗಂಗಾಧರ,  ವಿಜಯಕುಮಾರ, ಅನಂತಪದ್ಮನಾಭ ಹಾಗೂ ಇತರರು ಸಹಕರಿಸಿದರು  ಪುಟ್ಟಸಿದ್ಧನಾಯಕ ನಿರೂಪಣೆ ಕೈಗೊಂಡು ಕುಸ್ತಿ ಯಶಸ್ವಿಗೊಳಿಸಿದ ಸಮಸ್ತರಿಗೂ ಧನ್ಯವಾದ ಅರ್ಪಿಸಿದರು.

Read Full Post »

೧೯-೯-೨೦೧೦ ಆದಿತ್ಯವಾರ ಮೈಸೂರಿನ ಲಕ್ಷ್ಮೀಬಾಯಿ ರಸ್ತೆಯ ವಾಸುದೇವಾಚಾರ್ಯ ಭವನ, ನಾದಬ್ರಹ್ಮ ಸಂಗೀತ ಸಭಾ (ರಿ) ಸಭಾಂಗಣದಲ್ಲಿ  ಸಂಜೆ ೩ ಗಂಟೆಗೆ ಸರಿಯಾಗಿ ಜಿ .ಟಿ. ನಾರಾಯಣ ರಾವ್, ನಂಜುಂಡೇಗೌಡ, ಜಿ.ಟಿ.ಈಶ್ವರ, ಶಿಕಾರಿಪುರ ಹರಿಹರೇಶ್ವರ  ಅವರ ಸಂಸ್ಮರಣೆ  ಪ್ರಯುಕ್ತ  ಮೈಸೂರಿನ ಭಾಸಂಗೆ ಬಳಗ ಮತ್ತು ಮಹಾಲಿಂಗೇಶ್ವರ ದೇವಾಲಯ ಜಂಟಿಯಾಗಿ ಹಮ್ಮಿಕೊಂಡಿರುವ ಯಕ್ಷಗಾನ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ.

ಆಮಂತ್ರಣ ಪತ್ರಿಕೆ

ವಿವರ

Read Full Post »

ನಿಡ್ಲೆ ಗೋವಿಂದ ಭಟ್ಟರ ಯಕ್ಷಗಾನ ತಂಡಕ್ಕೆ ೨೫ ವರ್ಷ ತುಂಬಿದ ಬಗ್ಗೆ, ಮೈಸೂರಿನಲ್ಲಿ ಯಕ್ಷಗಾನ ಪ್ರಾರಂಭವಾದ ನೆನಪನ್ನು ಅನಂತವರ್ಧನ ಇಲ್ಲಿ ಬರೆದಿದ್ದಾರೆ.

೨೦೦೨ ಜೂನ್ ತಿಂಗಳ ಒಂದು ದಿನ ಮುಂಜಾನೆ ನಡುವಯಸ್ಸಿನ, ಸಾಧಾರಣ ಎತ್ತರದ ವ್ಯಕ್ತಿಯೊಬ್ಬರು ನನ್ನ ಕಚೇರಿಗೆ ಬಂದು ಸ್ವಪರಿಚಯದೊಂದಿಗೆ ತಮ್ಮ ಯಕ್ಷಗಾನ ತಂಡ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ತಿರುಗಾಟ, ಮೈಸೂರಿನಲ್ಲಿ ಒಂದೆರಡು ಕಾರ್ಯಕ್ರಮ ನಿಶ್ಚಯಿಸುವ ಬಗ್ಗೆ ಸಹಕಾರ ಕೋರಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಶಿತ ಯಕ್ಷಗಾನ ಮೇಳದ ಸೂರಿಕುಮೇರಿ ಗೋವಿಂದಭಟ್ಟರ ಹೆಸರು ಕೀರ್ತಿ ಕೇಳದ ಯಕ್ಷಗಾನ ಕಲಾಭಿಮಾನಿ ಇಲ್ಲವೆಂದೇ ಹೇಳಬಹುದು. ಆದರೆ ಈಗ ಸ್ವಪರಿಚಯ ಮಾಡಿಕೊಂಡ ನಿಡ್ಲೆ ಭಟ್ಟರ ಬಗ್ಗೆ ನನ್ನ ಬಳಿ ಏನೂ ಮಾಹಿತಿ ಇರಲಿಲ್ಲ. ತಂಡದ ಕಲಾವಿದರ ಬಗ್ಗೆ, ಆಡುವ ಪ್ರಸಂಗಗಳ ಬಗ್ಗೆ, ವೀಳ್ಯದ ಬಗ್ಗೆ, ಊಟೋಪಚಾರ ವಸತಿ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಿದೆ.

(ಹೆಚ್ಚು…)

Read Full Post »

Older Posts »