ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಹಳ್ಳಿ ಪರಿಸರದಲ್ಲಿ ಜನನ. ಪ್ರಪಂಚದಲ್ಲಿ ಜನ ಬೆಲೆ ಕೊಡುವ ವಿದ್ಯಾಭ್ಯಾಸ ಪಿ.ಯು.ಸಿವರೆಗೆ. ಬಾಲ್ಯದಿಂದ ೧೮ ವರ್ಷ ಹಳ್ಳಿಯಲ್ಲಿ ನೆಲೆಸಿ ಮದುವೆಯಾಗಿ ಬಂದು ಮೈಸೂರು ಎಂಬ ನಗರದಲ್ಲಿ ತಳ ಊರಿ ಸುಮಾರು ೨೫ ವರ್ಷವಾಯಿತು. ಕಥೆ, ಹಾಸ್ಯಲೇಖನ, ಮಕ್ಕಳ ಕಥೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯ ಓದುವ ಹವ್ಯಾಸ. ‘ಅಕ್ಷಮಾಲಾ’ ಮಕ್ಕಳ ನೀತಿಕಥಾ ಸಂಕಲನ (೧೯೯೮) ಪ್ರಕಟವಾಗಿದೆ. ಅತ್ತೆ, ಗಂಡನೊಡನೆ ಸಂತೃಪ್ತ ಜೀವನ.
ಹವ್ಯಾಸ: ಹೊಸ ಊರುಗಳಿಗೆ ಭೇಟಿ ಕೊಡುವುದು, ಚಾರಣ, ಓದು, ಬರವಣಿಗೆ, ಆಟ ವೀಕ್ಷಣೆ ಅದರಲ್ಲೂ ಕ್ರಿಕೆಟ್ಟಾಟ! ವಾಲಿಬಾಲ್, ಥ್ರೋಬಾಲ್ ಇತ್ಯಾದಿ. ಬ್ಲಾಗ್ ತೆರೆದು ೬ ವರ್ಷ ದಾಟಿತು.
೬-೧-೨೦೧೪
—————————————-
೧೭-೧-೨೦೧೪ ಇಂದಿಗೆ ಸರಿಯಾಗಿ ಈ ಜಾಲತಾಣಕ್ಕೆ ೭ ವರ್ಷ. ನನಗೆ ತೋಚಿದ್ದನ್ನೆಲ್ಲ ಇಲ್ಲಿ ಗೀಚಿರುವೆ. ಈ ಜಾಲತಾಣ ವೀಕ್ಷಿಸಿದ, ಓದಿ ಬೆನ್ನು ತಟ್ಟಿದ ಎಲ್ಲ ಚೇತನಗಳಿಗೂ ಹಾರ್ದಿಕ ಧನ್ಯವಾದಗಳು.
೧೭-೧-೨೦೧೫